ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ದೊಡ್ಡ ತಾಂಡ ಮತ್ತು ಸಣ್ಣ ತಾಂಡ ( ಹನುಮಂತಪುರ ) ಶ್ರೀ ಸೇವಾಭಾಯಾ, ಮಾರಿಯಮ್ಮ ದೇವಿಯು ತೀಜ್ ಉತ್ಸವ ಮತ್ತು ಗದ್ದಿಗೆ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಾಗಿಯಾಗಿ ದೇವಿ ಆಶೀರ್ವಾದ ಪಡೆದು ನೆನಪಿನ ಕಾಣಿಕೆ ಸ್ವೀಕರಿಸಿದ ಕ್ಷಣ
ಎನ್ ಡಿ ಎ ಚುನಾವಣೆ ಸಲುವಾಗಿ ಇಂದು ಶಿವಮೊಗ್ಗದ ಹರ್ಷ ದಿ ಫರ್ನ್ ಹೋಟೆಲ್ ನಲ್ಲಿ ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ H D Kumaraswamy ರವರು ಹಾಗು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾದ ಬಿ ವೈ ರಾಘವೇಂದ್ರ ರವರು ಹಾಗೂ ಜೆಡಿಎಸ್ ಮತ್ತು ಬಿಜೆಪಿ ಮುಖಂಡರುಗಳ ಸಮ್ಮುಖದಲ್ಲಿ ಮಾಧ್ಯಮ ಸುದ್ದಿಗೋಷ್ಠಿ ನಡೆಸಲಾಯಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಬಿ. ವೈ. ರಾಘವೇಂದ್ರ ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರ ಜೆಡಿಎಸ್-ಬಿಜೆಪಿ ಮುಖಂಡರಗಳ ಜೊತೆ ಶ್ರೀ ಬಿ ಎಸ್ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಸೌಹಾರ್ದ ಸಭೆ ನಡೆಸಲಾಯಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾದ B Y Raghavendra ಅವರ ನಾಮಪತ್ರ ಸಲ್ಲಿಸುವಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ.
ರಂಜಾನ್ ಉಪವಾಸದಲ್ಲಿರುವ ಮುಸ್ಲಿಂ ಭಾಂಧವರಿಗೆ ಹೊಳೆಹೊನ್ನೂರಿನಲ್ಲಿ ಶಿವಮೊಗ್ಗ ಗ್ರಾಮಾಂತರದ ಎಲ್ಲ ಮಸೀದಿಗಳಿಗೆ ಕರ್ಬುಜ, ಖರ್ಜೂರ ಕಲ್ಲಂಗಡಿ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದ ಸಂದರ್ಭ
ಕರ್ನಾಟಕ ಪ್ರದೇಶ ಜನತಾದಳ( ಜಾತ್ಯಾತೀತ ) ಪಕ್ಷದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ಓಂಕಾರಪ್ಪನವರನ್ನು ಪಕ್ಷದ ಅಧ್ಯಕ್ಷರಾದ H D Kumaraswamy ಅವರು ನೇಮಿಸಿದ್ದು, ಆದೇಶ ಪತ್ರವನ್ನು ಇಂದು ಶಿವಮೊಗ್ಗ ಕಚೇರಿಯಲ್ಲಿ ಓಂಕಾರಪ್ಪನವರಿಗೆ ನೀಡಿ ಶುಭ ಕೋರಿ ಜವಾಬ್ದಾರಿ ನೀಡಿದ ಸಂದರ್ಭ. ಈ ಸಮಯದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
2024 ರ ಲೋಕಸಭಾ ಚುನಾವಣೆಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆದ ಶ್ರೀ ಬಿ.ವೈ.ರಾಘವೇಂದ್ರ ಪರವಾಗಿ ಮಾತಯಾಚಿಸಲು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜೆಡಿಎಸ್ ಪಕ್ಷದ ಪರವಾಗಿ ಸ್ವಾಗತಿಸಿ ಅಭಿನಂದಿಸಿದ ಸಂದರ್ಭ
ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಎದುರಿಸುತ್ತಿದ್ದು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಂಸದರು ಶಿವಮೊಗ್ಗ ಕ್ಷೇತ್ರ ಶ್ರೀ ಬಿ.ವೈ.ರಾಘವೇಂದ್ರ ,ಶಾಸಕ ಶ್ರೀ ಆರಗ ಜ್ಞಾನೇಂದ್ರ, ಸಾಗರ ಮಾಜಿ ಶಾಸಕರು ಶ್ರೀ ಹಾಲಪ್ಪ, ಉಡುಪಿ ಮಾಜಿ ಶಾಸಕ ಶ್ರೀ ರಘುಪತಿ ಭಟ್ , ಬಿಜೆಪಿ ಜಿಲ್ಲಾಧ್ಯಕ್ಷರು ಶ್ರೀ ಟಿ.ಡಿ.ಮೇಘರಾಜ್ ,ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀ ಕಡಿದಾಳ್ ಗೋಪಾಲ್ ಹಾಗೂ ಪಕ್ಷದ ಇತರರ ಜೊತೆ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ.