to
Posted on 16/03/2024

ಲೋಕಸಭಾ ಚುನಾವಣೆಯನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಎದುರಿಸುತ್ತಿದ್ದು ಇಂದು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಂಸದರು ಶಿವಮೊಗ್ಗ ಕ್ಷೇತ್ರ ಶ್ರೀ ಬಿ.ವೈ.ರಾಘವೇಂದ್ರ ,ಶಾಸಕ ಶ್ರೀ ಆರಗ ಜ್ಞಾನೇಂದ್ರ, ಸಾಗರ ಮಾಜಿ ಶಾಸಕರು ಶ್ರೀ ಹಾಲಪ್ಪ, ಉಡುಪಿ ಮಾಜಿ ಶಾಸಕ ಶ್ರೀ ರಘುಪತಿ ಭಟ್ , ಬಿಜೆಪಿ ಜಿಲ್ಲಾಧ್ಯಕ್ಷರು ಶ್ರೀ ಟಿ.ಡಿ.ಮೇಘರಾಜ್ ,ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀ ಕಡಿದಾಳ್ ಗೋಪಾಲ್ ಹಾಗೂ ಪಕ್ಷದ ಇತರರ ಜೊತೆ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ.

Posted on 14/03/2024

ಬೆಂಗಳೂರಿನ ಜೆ ಪಿ ಭವನದಲ್ಲಿ ಜನತಾದಳ ಕರ್ನಾಟಕ ಮಹಿಳಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಮಹಿಳಾ ದಿನಾಚರಣೆ ಆಚರಿಸಿದ ಸಂದರ್ಭ.

Posted on 12/03/2024

ಮಲೆನಾಡು ಅಭಿವೃದ್ಧಿ ಡೆವೆಲಪಮೆಂಟ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದ ಆರ್. ಎಂ. ಮಂಜುನಾಥ್ ಗೌಡರನ್ನು ಭೇಟಿ ಮಾಡಿ ಶುಭ ಹಾರೈಸಿದ ಕ್ಷಣ.

Posted on 11/03/2024

ಭದ್ರಾವತಿ ತಾಲೂಕಿನ ದಾನವಾಡಿ ಹಾಗು ಅರೆಕೆರೆ ಗ್ರಾಮದಿಂದ ಚನ್ನಗಿರಿ ಮುಖ್ಯ ರಸ್ತೆಗೆ ಹಾದು ಹೋಗುವ ಭದ್ರ ಬಲದಂಡೆ ನಾಲೆಯ ಸೇತುವೆ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿದ ಕ್ಷಣ. ಈ ಸಮಯದಲ್ಲಿ ಗ್ರಾಮದ ಮುಖಂಡರು, ಗ್ರಾಮಸ್ಥರು ಭಾಗಿಯಾಗಿದ್ದರು.

Posted on 11/03/2024

ಶಿವಮೊಗ್ಗ ತಾಲೂಕಿನ ಕೋಹಳ್ಳಿ ಗ್ರಾಪಂ ವ್ಯಾಪ್ತಿಯ ಆಯನೂರಿನಲ್ಲಿ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ನೆನಪಿನ ಕಾಣಿಕೆ ಸ್ವೀಕರಿಸಿದ ಕ್ಷಣ. ಈ ಸಮಯದಲ್ಲಿ ಗ್ರಾಮದ ಹಿರಿಯರು ಮುಖಂಡರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಯಾಗಿದ್ದರು.

Posted on 10/03/2024

ಶಿವಮೊಗ್ಗ ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿಯ ಹೊನ್ನವಿಲೆ ಮತ್ತು ಜಯಂತಿ ಗ್ರಾಮದಲ್ಲಿ ಜೆ ಜೆ ಎಂ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ ಕ್ಷಣ. ಈ ಸಮಯದಲ್ಲಿ ಗ್ರಾಮದ ಮುಖ್ಯಸ್ಥರು, ಗ್ರಾಮಸ್ಥರು, ಮುಖಂಡರು ಭಾಗಿಯಾಗಿದ್ದರು.

Posted on 10/03/2024

ಶಿವಮೊಗ್ಗ ತಾಲೂಕಿನ ಕೊರಲಹಳ್ಳಿ ಗ್ರಾಮ ಪಂಚಾಯಿತಿಯ, ಕಾಚಿನಕಟ್ಟೆ ಕೊರಲಹಳ್ಳಿ ಗ್ರಾಮದ ಭದ್ರಾ ನಾಲಾ ಸೇತುವೆಯ ಗುದ್ದಲಿ ಪೂಜೆ ನೆರವೇರಿಸಿದ ಕ್ಷಣ. ಈ ಸಮಯದಲ್ಲಿ ಊರಿನ ಮುಖಂಡರು, ಗ್ರಾಮಸ್ಥರು ಭಾಗಿಯಾಗಿದ್ದರು.

Posted on 10/03/2024

ಶಿವಮೊಗ್ಗ ತಾಲೂಕಿನ ಸಂತೆಕಡೂರಿನಲ್ಲಿ ನೂತನ ಹಾಪ್ ಕಾಮ್ಸ್ ಶಿವಮೊಗ್ಗ, ಹಣ್ಣು ತರಕಾರಿ ಮಳಿಗೆಯನ್ನು ಉದ್ಘಾಟನೆ ಮಾಡಲಾಯಿತು. ಈ ಸಮಯದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್ ರವರು, ಮುಖಂಡರು, ಗ್ರಾಮಸ್ಥರು ಭಾಗಿಯಾಗಿದ್ದರು.