ಹೊಳೆಹೊನ್ನೂರಿನಲ್ಲಿ ಕರ್ನಾಟಕ ಸ್ಟೇಟ್ ವನ್ನಿಯರ್ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್(ರಿ) ಅವುರು ಆಯೋಜಿಸಿದ್ದ ಟ್ರಸ್ಟಿಗಳ ಸಭೆಯ ಉದ್ಘಾಟನೆ ಮಾಡಿ ಮಾತನಾಡಿದ ಸಂದರ್ಭ ಮತ್ತು ಹೊಳೆಹೊನ್ನೂರಿನ ಭಗೀರಥ ತೋಟೊತ್ಪನ್ನ ಬೆಳೆಗಾರರ ಮತ್ತು ಮಾರಾಟ ಸಹಕಾರ ಸಂಘದಲ್ಲಿ ನೂತನ ನ್ಯಾಯಬೆಲೆ ಅಂಗಡಿಯ ಬಗ್ಗೆ ಚರ್ಚಿಸಲಾಯಿತು.
ಶಿವಮೊಗ್ಗದ ಫ್ರೀಡಂಪಾರ್ಕ್'ನಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ "ಯುವನಿಧಿ" ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣ.
ಶಿವಮೊಗ್ಗದ ಕರ್ನಾಟಕ ನೀರಾವರಿ ನಿಗಮ ಕಚೇರಿಯಲ್ಲಿ ನೀರಾವರಿ ಅಭಿಯಂತರರರು ಮತ್ತು ಅಧೀಕ್ಷಕ ಅಭಿಯಂತರರ ಜೊತೆಗೆ ನಡೆದ ಕೆರೆಗಳ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಭೆ ನಡೆಸಲಾಯಿತು, ಈ ಸಮಯದಲ್ಲಿ ನೀರಾವರಿ ನಿಗಮ ಅಧಿಕಾರಿಗಳು ಭಾಗಿಯಾಗಿದ್ದರು.
ಹೊಳೆಹೊನ್ನೂರಿನ ಕನ್ನೆಕೋಪ್ಪದ ಸರ್ಕಾರಿ ಕಿರಿಯ ಪ್ರಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ನೇರವೇರಿಸಲಾಯಿತು.
ಭದ್ರಾವತಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಕೊಪ್ಪ ಶಾಲೆಯ 2023-24 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಶಾಲಾ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ
ಹೊಳೆಹೊನ್ನೂರು ಸಮೀಪದ ತಟ್ಟೆಹಳ್ಳಿಯಲ್ಲಿ ಅರಳಿಕಟ್ಟೆ ಹಾಗೂ ಕೆರೆಗೆ ಕಟ್ಟೆಗಳನ್ನು ಕಟ್ಟುವಂತೆ ಗ್ರಾಮಸ್ಥರ ಮನವಿ ಸ್ವೀಕರಿಸಿ ಭರವಸೆ ನೀಡಲಾಯಿತು ಮತ್ತು ಇದೇ ಗ್ರಾಮದ ಹನುಮಂತಪ್ಪ ಎಂಬುವವರ ಮನೆ ಎಲ್.ಪಿ.ಜಿ ಸಿಲೆಂಡರ್ ಸ್ಫೋಟದಿಂದಾಗ ಪೂರ್ತಿ ಸುಟ್ಟು ಹೋಗಿತ್ತು ಅವರ ಮನೆಗೆ ಭೇಟಿ ನೀಡಿ ಕೈಲಾದಸ್ಟು ಸಹಾಯ ಮಾಡಲಾಯಿತು.
ಮಲವಗೊಪ್ಪದಲ್ಲಿನ ಕಾಡಾ ಕಚೇರಿಯಲ್ಲಿ ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಜನವರಿ 10ರಿಂದ ಹಾಗೂ ಬಲದಂಡೆ ಕಾಲುವೆಗೆ ಜನವರಿ 20ರಿಂದ ನೀರು ಹರಿಸಲು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ತೀರ್ಮಾನಿಸಲಾಯಿತು.