to
Posted on 04/07/2023

ವಿಧಾನಸಭಾ ಬಜೆಟ್ ಅಧಿವೇಶನಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣನವರ ಜೊತೆ ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಯಗಳ ಕುರಿತು ಚರ್ಚೆ ನಡೆಸಿದ ಸಂದರ್ಭ.

Posted on 08/08/2023

ಸನ್ಯಾಸಿ ಕೊಡಮೊಗ್ಗಿಯಲ್ಲಿ ಗ್ರಾಮ ಸಭೆಯನ್ನು ನಡೆಸಲಾಯಿತು. ಜೊತೆಗೆ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲಾಯಿತು. ಗ್ರಾಮದ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.

Posted on 22/06/2023

ಸಿದ್ಲಿಪುರ - ಹೊಳೆಹಟ್ಟಿಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಾ ಇದ್ದು, ಈ ದಿನ ಸ್ಥಳಕ್ಕೆ ತೆರಳಿ ಕಾಮಗಾರಿಯನ್ನು ಪರಿಶೀಲನೆ ನಡೆಸಲಾಯಿತು. ಸರಕಾರಿ ಅಧಿಕಾರಿಗಳು ಸೇತುವೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿದರು.

Posted on 22/06/2023

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ಅವರಿಗೆ ಜಡ್ಡುಕೆರೆ ಹಸ್ತಾಂತರ ಕಾರ್ಯಕ್ರಮ ಮತ್ತು ಸಾಧನಾ ಸಮಾವೇಶ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರ ಮಾಡಿ, ಆಶೀರ್ವಾದ ಪಡೆಯಲಾಯಿತು.

Posted on 19/06/2023

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಣ ಸಚಿವರಾದ ಶ್ರೀಯುತ Madhu Bangarappa ರವರ ಕಚೇರಿಯನ್ನು ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ‌ ಉದ್ಟಾಟನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾನ್ಯ ಸಚಿವರಿಗೆ ಶುಭ ಹಾರೈಸಿದ ಕ್ಷಣಗಳು.

Posted on 15/06/2023

ಕರ್ನಾಟಕ ದಲಿತರ ಸಂಘರ್ಷ ಸಮಿತಿ, ಕರ್ನಾಟಕ ದಲಿತ ನೌಕರರ ಒಕ್ಕೂಟ ಜಿಲ್ಲಾ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 132 ನೇ ಜನ್ಮದಿನ ಹಾಗೂ ದ.ಸಂ.ಸ.ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪನವರ 86 ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂದರ್ಭ.

Posted on 10/06/2023

Posted on 07/06/2023

ಜನಸೇವೆಗೆ ಕಚೇರಿ ಆರಂಭವಾಗಿದೆ. ಶಿವಮೊಗ್ಗ ಗ್ರಾಮಾತರ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಅವರ ಕಷ್ಟ ಸುಖಗಳನ್ನು ಆಲಿಸಲು ಅಧಿಕೃತವಾಗಿ ಶಾಸಕರ ಕಚೇರಿ ಆರಂಭವಾಗಿದೆ.

Posted on 31/05/2023

ಕೊಮ್ಮನಾಳುವಿನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮತದಾರರಿಗೆ ಧನ್ಯವಾದ ತಿಳಿಸಿ, ಅಭಿನಂದನೆ ಸ್ವೀಕರಿಸಿ ಮಾತಾಡಿದ ಸಂದರ್ಭ.