to
Posted on 26/08/2024

ಶಿವಮೊಗ್ಗ ತಾಲೂಕಿನ ನಿದಿಗೆ ಗ್ರಾಮ ಪಂಚಾಯಿತಿಯ ಟಿ. ಎಸ್. ಡಬ್ಲ್ಯೂ. ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮುದಾಯ ಭವನ ಹಾಗೂ ಓವರ್ ಹೆಡ್ ಟ್ಯಾಂಕ್ ನ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ, ಉದ್ಘಾಟನೆ ನೆರವೇರಿಸಿದ ಕ್ಷಣ.

Posted on 23/08/2024

ಆಯನೂರಿನ ಕೋಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ, ಅಲ್ಲಿನ ಕಾರ್ಯವೈಖರಿ ಮತ್ತು ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು.

Posted on 23/08/2024

ಶಿವಮೊಗ್ಗ ಸಮೀಪದ ಆಯನೂರಿನಲ್ಲಿ ಪ್ರತೀಕ್ ಗೌಡರವರಿಗೆ ಸೇರಿದ ಎಸ್. ಎಲ್. ವಿ ಅಯ್ಯಂಗಾರ್ ಬೇಕರಿ ಮೊನ್ನೆ ರೆಫ್ರಿಜರೇಟರ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸಿಲೆಂಡರ್ ಬ್ಲಾಸ್ಟ್ ಆಗಿ ಇಡೀ ಬೇಕರಿ ಸುಟ್ಟು ಹೋಗಿದ್ದು, ಇಂದು ಬೇಕರಿಗೆ ಭೇಟಿ ನೀಡಿ ಮಾಲೀಕರ ಬಳಿ ಘಟನೆ ಬಗ್ಗೆ ತಿಳಿದು, ಮತ್ತು ಬೇಕರಿ ಮಾಲೀಕರಿಗೆ ಧೈರ್ಯ ನೀಡಲಾಯಿತು.

Posted on 18/08/2024

ಶಿವಮೊಗ್ಗದ ಹೊಳೆಹೊನ್ನೂರಿನಲ್ಲಿ ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣಾ ಸಹಕಾರ ಸಂಘ ನಿಯಮಿತ ವತಿಯಿಂದ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಕ್ಷಣ.

Posted on 16/08/2024

ಶಿವಮೊಗ್ಗ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ, ಶಿವಮೊಗ್ಗ ಉಸ್ತುವಾರಿ ಸಚಿವರು ಮತ್ತು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಲಾಯಿತು.

Posted on 15/08/2024

ಹೊಳ್ಳೆಹೊನ್ನೂರಿನ ಹೊಸಕೊಪ್ಪ ಗ್ರಾಮದಲ್ಲಿ ನೂತನ ಸರ್ಕಾರಿ ಅಂಗನವಾಡಿ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು.

Posted on 15/08/2024

ಶಿವಮೊಗ್ಗದ ಹೊಳೆಹೊನ್ನೂರು ಸರ್ಕಾರಿ ಪ್ರಥಮ ಧರ್ಜಿ ಕಾಲೇಜಿನಲ್ಲಿ 78ನೇ ಸ್ವತಂತ್ರ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ ಸಂದರ್ಭ.

Posted on 14/08/2024

ಶಿವಮೊಗ್ಗದ ಹೊಳಲೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕೇಂದ್ರದ ಪರಿಶೀಲನೆ ನಡೆಸಿ ಮತ್ತು ಕುಂದು ಕೊರತೆಗಳ ಬಗ್ಗೆ ಸಂಬಂಧಪಟ್ಟ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ, ಹಾಗೆ ರೋಗಿಗಳ ಆರೋಗ್ಯ ವಿಚಾರಿಸಲಾಯಿತು.