to
Posted on 06/02/2024

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ (ರಿ) ಇವರ ಅಡಿಯಲ್ಲಿ ಹಮ್ಮಿಕೊಂಡಿದ್ದ 578ನೇ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದ ಅಗಸವಳ್ಳಿ ಗ್ರಾಮಪಂಚಾಯಿತಿಯ ರಾಮೇನಕೊಪ್ಪ ಕೆರೆ ಅಭಿವೃದ್ಧಿ ಸಮಿತಿಯವರಿಗೆ ರಾಮೇನಕೊಪ್ಪ ಕೆರೆ ಹಸ್ತಾಂತ ಮಾಡುವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗಿಯಾದ ಕ್ಷಣ.

Posted on 06/02/2024

ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪದಲ್ಲಿರುವ ಅಮೃತ್ ನೋನಿ ಶಾಖೆಗೆ ಭೇಟಿ ನೀಡಿ ಸಂಸ್ಥಾಪಕರಾದ ಶ್ರೀನಿವಾಸ್ ಮೂರ್ತಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸ್ವೀಕರಿಸಿದ ಕ್ಷಣ.

Posted on 03/02/2024

ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಇಂಧನ ಸಚಿವರಾದ ಶ್ರೀ ಕೆ. ಜೆ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಮತ್ತು ಇಂಧನ ಇಲಾಖೆಯ (ಮೆಸ್ಕಾಂ ಮತ್ತು ಕೆಪಿಟಿಸಿಎಲ್) ಸಂಬಂಧಿತ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗಿಯಾದ ಕ್ಷಣ.

Posted on 31/01/2024

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಬಿಳಚಿ ಕ್ಯಾಂಪ್ ನ ಸರ್ಕಾರಿ ಕನ್ನಡ ಮತ್ತು ತಮಿಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳ ವಾರ್ಷಿಕ ಕಲರವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಕ್ಷಣ. ಹಾಗೂ ಇದೆ ಸಮಯದಲ್ಲಿ ಶಾಲೆಯ ಶಿಕ್ಷಕರಾದ ರಂಗನಾಥ್ ರವರು ಬರೆದ ದೇವರ "ತುಂಟಾಟ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

Posted on 31/01/2024

ಸ್ವಗೃಹದಲ್ಲಿ, 28-01-2024 ರಂದು ನಡೆದ ಶಿವಮೊಗ್ಗದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ 17 ನಿರ್ದೇಶಕರಿಗೆ ಸನ್ಮಾನ ಮಾಡಿದ ಸಂದರ್ಭ.

Posted on 30/01/2024

ಹೊಳೆಹೊನ್ನೂರಿನಲ್ಲಿ ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಾಗವತ್ಪದರು, ಬಾಳೆಹೊನ್ನೂರು ಇವರ 68ನೇ ಜನ್ಮ ದಿನೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಗುರುಗಳ ಆಶೀರ್ವಾದ ಪಡೆದ ಕ್ಷಣ.

Posted on 18/01/2024

ಕುಂಸಿ‌ ಸಮೀಪದ ಹೊರಬೈಲು ಗ್ರಾಮದಲ್ಲಿ ಯುವಕನೊಬ್ಬ ದಲಿತ ಯುವತಿಯನ್ನು ಪ್ರೇಮಿಸಿ ವಿವಾಹವಾಗಿದ್ದರು, ಈ ಘಟನೆಯಿಂದಾಗಿ ಗ್ರಾಮಸ್ಥರು ಯುವಕ‌ ಹಾಗೂ ಅವನ ಕುಟುಂವದವರನ್ನು ಊರಿನಿಂದ ಬಹಿಷ್ಕರಿಸಿದ್ದರು ಎಂದು ತಿಳಿದು ಬಂದಿದ್ದು, ನಿನ್ನೆ ಹೊರಬೈಲು ಗ್ರಾಮಕ್ಕೆ ಭೇಟಿ ಕೊಟ್ಟು, ಗ್ರಾಮಸ್ಥರಿಗೆ, ಈ ರೀತಿಯ ಮೌಡ್ಯವನ್ನು ಆಚರಿಸಬಾರದು, ಇಲ್ಲಿ ಎಲ್ಲರೂ ಸಮಾನರು ಎಂದು ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದ ಕ್ಷಣ.

Posted on 17/01/2024

ಭದ್ರಾವತಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅರಹತೊಳಲು ಕೈಮರದಲ್ಲಿ ನೂತನ ಶಾಲಾ ಕೊಠಡಿಯ ಉದ್ಘಾನೆ ಮಾಡಿ ಸನ್ಮಾನ ಸ್ವೀಕರಿಸಿದ ಕ್ಷಣ.