ಶಿವಮೊಗ್ಗ ಗ್ರಾಮಾಂತರದ ಪಿಳ್ಳಂಗಿರಿಯ ಸರಕಾರಿ ಶಾಲೆಯನ್ನು ರೌಂಡ್ ಟೇಬಲ್ ಇಂಡಿಯಾ 166 ಶಿವಮೊಗ್ಗ ಘಟಕ ಹಾಗೂ ದಾನಿಗಳ ಸಹಾಯದಿಂದ ಯುವ ಕೈಗಾರಿಕೋದ್ಯಮಿ ದಿವಂಗತ ಶ್ರೀ ಶರತ್ ಭೂಪಾಳಂ ಅವರ ಸ್ಮರಣಾರ್ಥವಾಗಿ ಅಭಿವೃದ್ಧಿಗೊಳಿಸಿ ಶಾಲೆಗೆ ಶರತ್ ಭೂಪಾಳಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ನಾಮಕರಣ ಮಾಡಿ ಭಾನುವಾರ ಉದ್ಘಾಟನೆ ನೆರವೇರಿಸಲಾಯಿತು.
ಶಿವಮೊಗ್ಗ ತಾಲೂಕಿನ ಮಲ್ಲಾಪುರ ಗ್ರಾಮಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಾಣಿಜ್ಯ ಮಳಿಗೆಗಳ ಹಾಗು ಮಹಿಳಾ ಸ್ವ-ಸಹಾಯ ಸಂಘದ ಸ್ವ ಉದ್ಯೋಗ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ, ಉದ್ಘಾಟನೆ ನೆರವೇರಿಸಿದ ಕ್ಷಣ. ಈ ಸಮಯದಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕಿಶ್ ಬಾನುರವರು ಹಾಗು ತಾಲೂಕು ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು
ಶ್ರೀ ಮಾವುರದಮ್ಮ ಸಮುದಾಯ ಭವನದಲ್ಲಿ ಶಿವಮೊಗ್ಗ ಲೋಕಸಭಾ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ "ಕೃತಜ್ಞತಾ - ಅಭಿನಂದನಾ ಸಮಾರಂಭ" ದಲ್ಲಿ ಭಾಗಿಯಾಗಿ ಅಭಿನಂದನೆ ಸಲ್ಲಿಸಲಾಯಿತು. ಈ ಸಮಯದಲ್ಲಿ ಶಿವಮೊಗ್ಗ ಲೋಕಸಭಾ ಸಂಸದರಾದ ಬಿ ವೈ ರಾಘವೇಂದ್ರ ರವರು, ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಸದಸ್ಯರಾದ ಡಾ. ಧನಂಜಯ ಸರ್ಜಿ ರವರು, ಮತ್ತು ಜೆಡಿಎಸ್ & ಬಿಜೆಪಿ ಕಾರ್ಯಕರ್ತರು, ಮುಖಂಡರು, ಹಾಗೂ ಗಣ್ಯರು ಭಾಗಿಯಾಗಿದ್ದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 4ನೇ ಬಾರಿ ಅಭೂತ ಪೂರ್ವ ಗೆಲುವು ದಾಖಲಿಸಿ ಮತ್ತೊಮ್ಮೆ ಸಂಸದರಾಗಿ ಸಂಸತ್ ಪ್ರವೇಶಿಸಲಿರುವ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ B Y Raghavendra ರವರಿಗೆ ಶಿವಮೊಗ್ಗದ ನೆಹರು ರಸ್ತೆಯ ಗಾಂಧಿಮಂದಿರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರುಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಶಿವಮೊಗ್ಗ ತಾಲೂಕಿನ ಆಯನೂರು ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಕಟ್ಟಡದ ಸ್ಥಳ ಮತ್ತು ಕಾಮಗಾರಿಯಲ್ಲಿರುವ ಕೆಲಸಗಳನ್ನು ಪರಿಶೀಲನೆ ನಡೆಸಲಾಯಿತು.
ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಜೆಡಿಎಸ್ - ಬಿ.ಜೆ.ಪಿ ಬೆಂಬಲಿತ ಎನ್.ಡಿ.ಎ ಅಭ್ಯರ್ಥಿಗಳಾದ ಭೋಜೇಗೌಡರು ಹಾಗು ಧನಂಜಯ ಸರ್ಜಿ ಅವರ ಪರವಾಗಿ ಇಂದು ಆಯನೂರು ಮತ್ತು ಕುಂಸಿ ಭಾಗದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ ಚುನವಣಾ ಕುರಿತು ಸಭೆ ನಡೆಸಲಾಯಿತು.
ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಜೆಡಿಎಸ್ - ಬಿ.ಜೆ.ಪಿ ಬೆಂಬಲಿತ ಎನ್.ಡಿ.ಎ ಅಭ್ಯರ್ಥಿಗಳಾದ ಭೋಜೇಗೌಡರು ಹಾಗು ಧನಂಜಯ ಸರ್ಜಿ ಅವರ ಪರವಾಗಿ ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಾರನಹಳ್ಳಿ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಿಗೆ ತೆರಳಿ ಚುನವಣಾ ಕುರಿತು ಸಭೆ ನಡೆಸಲಾಯಿತು.
ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಜೆಡಿಎಸ್ - ಬಿ.ಜೆ.ಪಿ ಬೆಂಬಲಿತ ಎನ್.ಡಿ.ಎ ಅಭ್ಯರ್ಥಿಗಳಾದ ಭೋಜೇಗೌಡರು ಹಾಗು ಧನಂಜಯ ಸರ್ಜಿ ಅವರ ಪರವಾಗಿ ಇಂದು ಶಿವಮೊಗ್ಗ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲ್ಲಿಹಾಳ್ ಮತ್ತು ಲಯನ್ಸ್ ಕ್ಲಬ್ ಸ್ಕೂಲ್ ಹೊಳೆಹೊನ್ನೂರಿನಲ್ಲಿ ಚುನವಣಾ ಕುರಿತು ಸಭೆ ನಡೆಸಲಾಯಿತು.
ಎನ್ ಡಿ ಎ ಚುನಾವಣೆ ಸಲುವಾಗಿ ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು ಮಂಡಲ, ಅರಬಿಳಚಿ ಮಹಾಶಕ್ತಿ ಕೇಂದ್ರ ದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾದ ಬಿ ವೈ ರಾಘವೇಂದ್ರ ರವರ ಪರ ಮತ ಯಾಚನೆಗೆ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಭಾಗಿಯಾದ ಕ್ಷಣ. ಈ ಸಮಯದಲ್ಲಿ ಬಿ ಜೆ ಪಿ ಮುಖಂಡರು, ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಮತ್ತು ಜೆಡಿಎಸ್ ಮತ್ತು ಬಿ ಜೆ ಪಿ ಮುಖಂಡರು ಗಳು ಭಾಗಿಯಾಗಿದ್ದರು.