to
Posted on 09/03/2024

ಶಿವಮೊಗ್ಗ ತಾಲೂಕಿನ ಹುಣಸೂಡು ತಾಂಡದಲ್ಲಿ MADB(ಮಲ್ನಾಡ್ ಅಭಿವೃದ್ಧಿ ಡೆವೆಲಪಮೆಂಟ್ ಬೋರ್ಡ್) ಅನುದಾನದಿಂದ 15ಲಕ್ಷ ವೆಚ್ಚದಲ್ಲಿ CC ರೋಡ್ ಗೆ ಚಾಲನೆ ನೀಡಲಾಯಿತು. ಹಾಗು ಇದೆ ಸಂಧರ್ಭದಲ್ಲಿ ಹುಣಸೂಡು ಗ್ರಾಮದಲ್ಲಿ ನೂತನ ಬಸವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಅಡಿಪಾಯ ಹಾಕಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮುಖಂಡರು, ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.

Posted on 06/03/2024

ಮಲ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕೆರೆ ಸಂಪೂರ್ಣ ಬತ್ತುವ ಹಂತಕ್ಕೆ ಬಂದಿದ್ದು ಇದಕ್ಕೆ ಸಂಬಂಧಪಟ್ಟಂತೆ ಇಂದು ಹೊನ್ನಾಳಿ ಐ.ಬಿ ಯಲ್ಲಿ ಹೊನ್ನಾಳಿ ತಾಲೂಕಿನ ಶಾಸಕರಾದ ಡಿ.ಜಿ.ಶಾಂತನ ಗೌಡ ರವರು ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳು, ಎಸ್.ಪಿ, ಸಹಾಯಕ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳು, ರೈತಮುಖಂಡರುಗಳು ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಮ್ಮ ಸರ್ವೇ ಪ್ರಕಾರ ಹೊಸಕೆರೆಯಲ್ಲಿ 30% ನೀರಿದ್ದು. ಸದ್ಯದ ಪರಿಸ್ಥಿಯಲ್ಲಿ ಪಕ್ಕದ ತಾಲೂಕಿಗೆ ನೀರು ಬಿಡಲು ಆಗುವುದಿಲ್ಲ. ಆದರೂ ಪಕ್ಕದ ತಾಲೂಕಿನವರು 90% ನೀರು ಇರುವುದಾಗಿ ಹೇಳಿದ್ದು, ಹೀಗಾಗಿ ಜಂಟಿ ಸರ್ವೇ ಮಾಡಿ ನೀರು ಬಿಡುವ ಬಗ್ಗೆ ನಂತರ ಚರ್ಚಿಸೋಣ ಎಂದು ಸಭೆ ಮುಗಿಸಲಾಯಿತು.

Posted on 29/02/2024

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಿಕ್ಕಮರಡಿ ಗ್ರಾಮಸ್ಥರು ಮತ್ತು ಶಿವಮೊಗ್ಗ ತಾಲ್ಲೂಕು ಸಕ್ಕರೆ ಕಾರ್ಖಾನೆ ರೈತರು ಮತ್ತು ಕಾರ್ಮಿಕರ ಭೂ ಹಕ್ಕು ಹೋರಾಟ ಸಮಿತಿಯವರು ನಡೆಸಿದ ಸಕ್ಕರೆ ಕಾರ್ಖಾನೆಯ ನಕಲಿ ಮಾಲೀಕರ ವಿರುದ್ದ ನಡೆಸಿದ ಪ್ರತಿಭಟನಾ ಮೆರೆವಣಿಗೆಯಲ್ಲಿ ಭಾಗವಹಿಸಿ ಮನವಿ ಸ್ವೀಕರಿಸಿ ನೊಂದ ರೈತರು, ನಿವಾಸಿಗಳು ಮತ್ತು ಕಾರ್ಮಿಕರ ಪರ ನಿಂತ ಕ್ಷಣ

Posted on 29/02/2024

ಭದ್ರಾವತಿ ತಾಲ್ಲೂಕು ಅರದೊಟ್ಲು ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಮರಾಠ ಸಂಘ(ರಿ.)ದ ವತಿಯಿಂದ ಏರ್ಪಡಿಸಿದ್ದ ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತೋತ್ಸವದಲ್ಲಿ ಭಾಗಿಯಾದ ಕ್ಷಣ.

Posted on 28/02/2024

ಶಿಕಾರಿಪುರದಲ್ಲಿ ಆಯೋಜಿಸಿದ್ದ ಎಸ್‌ಸಿ-ಎಸ್‌ಟಿ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಕ್ಷಣ ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪರವರು, ಸಂಸದರಾದ ಶ್ರೀ B Y ರಾಘವೇಂದ್ರ ರವರು, ಹಾಗು B Y ವಿಜೇಂದ್ರ ರವರು, ಮಾಜಿ ಸಚಿವರಾದ B C ಪಾಟಿಲ್ ರವರು, ಶ್ರೀ ತಮ್ಮೇಶ್ ಗೌಡ, ಸ್ಥಳೀಯ ಮುಖಂಡರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Posted on 10/02/2024

ಶಿವಮೊಗ್ಗ ತಾಲ್ಲೂಕಿನ ಪುರದಾಳು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಗ್ರಾಮದ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಮಯದಲ್ಲಿ ಶಿವಮೊಗ್ಗ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಪುರದಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Posted on 07/02/2024

ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನಲ್ಲಿ ಶಿವಮೊಗ್ಗ ಜಿಲ್ಲಾ ಕೊರಚರ ಮಹಾ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದ ಕ್ಷಣ, ಹಾಗೂ ಈ ಸಮಯದಲ್ಲಿ ಶ್ರೀ ಶ್ರೀ ಪ್ರತ್ಯoಗೀರಾದೇವಿ ದೇವಾಲಯದ ಪರಮಪೂಜ್ಯ ಡಾ. ಶ್ರೀ ಶ್ರೀ ಸುಪ್ರಿತ್ ಗುರೂಜಿಯವರರು ಮತ್ತು ಸಂಘದ ಅದ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.

Posted on 07/02/2024

ಕರ್ನಾಟಕ ರಾಜ್ಯ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘ (ರೀ) ಬೆಂಗಳೂರು ಇದರ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಹರೀಶ್ ನಾಯ್ಕ್ ರವರು ಇಂದು ಕಚೇರಿಗೆ ಭೇಟಿ ನಿಡಿದರು ಹಾಗು ಸಂಘದ 2024ರ ಡೈರಿಯನ್ನು ಲೋಕಾರ್ಪಣೆ ಮಾಡಲಾಯಿತು.

Posted on 07/02/2024

ಶಿವಮೊಗ್ಗ ತಾಲೂಕಿನ ಅಗಸವಳ್ಳಿ ಗ್ರಾ.ಪಂ ಯ ಬಸವಪುರದ ನವೀಕರಣಗೊಳಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾದ ಕ್ಷಣ.

Posted on 13/02/2023

Posted on 13/02/2023

Posted on 13/02/2023