ಹೊಳೆಹೊನ್ನರಿನಲ್ಲಿ ಜಿಲ್ಲಾಡಳಿತ ಶಿವಮೊಗ್ಗ ಪಟ್ಟಣ ಪಂಚಾಯಿತಿ ಹೊಳೆಹೊನ್ನೂರು ವತಿಯಿಂದ 2023-24 ನೇ ಸಾಲಿನ ಎಸ್.ಎಫ್.ಸಿ ಶೇ 24.10, 7.25 ಹಾಗೂ ಶೇ 5 ರ ಕಲ್ಯಾಣ ಯೋಜನೆಗಳ ಅಡಿ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ಭಾಗಿಯಾಗಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಿದ ಕ್ಷಣ.
ಸೂಗೂರು ಗ್ರಾಮಪಂಚಾಯಿತಿಯ ಕ್ಯಾತಿನಕೊಪ್ಪ ಗ್ರಾಮದಲ್ಲಿ ಸರ್ಕಾರಿ ಅಂಗನವಾಡಿ ಕಟ್ಟಡ ಬೀಳುವ ಹಂತದಲ್ಲಿದು ಅದನ್ನ ವೀಕ್ಷಣೆ ಮಾಡಿ ಪರಿಹಾರ ಕೊಡುವುದಾಗಿ ಭರವಸೆ ನೀಡಿ, ಹಾಗೂ ಗ್ರಾಮದ ಕುಡಿಯುವ ನೀರು ಹಾಗೂ ಒಳಚರಂಡಿ ದುರಸ್ಥಿಯಲ್ಲಿದ್ದು ಅದರ ಬಗ್ಗೆ ಗ್ರಾಮಸ್ಥರೊಂದಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಗ್ರಾಮದ ಜನರೊಂದಿಗೆ ಸಭೆ ನಡೆಸಲಾಯಿತು.
ಶಿವಮೊಗ್ಗ ತಾಲೂಕಿನ ಗೌಡನಕೆರೆ ತುಂಬಿ ಹರಿಯುತ್ತಿದ್ದು ಹೆಚ್ಚಿನ ನೀರು ಹರಿದು ಸವಳಂಗ ಕೆರೆಗೆ ಪೋಲಾಗುತ್ತಿರುವ ಕಾರಣ ಆಯನೂರು ಸುತ್ತಮುತ್ತಲಿನ ಗ್ರಾಮಸ್ಥರ ಮನವಿ ಮೇರೆಗೆ ಗೌಡನಕೆರೆಯಿಂದ ಹೋಗುವ ಕಾಲುವೆಗೆ ಪಿಕ್ ಅಪ್ ಮಾಡಲು ಹಣ ಮಂಜೂರಾಗಿದ್ದು, ಇಂದು ಆಯನೂರು ಸಮೀಪ ಹಾದು ಹೋಗುವ ಕಾಲುವೆ ವೀಕ್ಷಣೆ ಮಾಡಿ ಇದರ ಬಗ್ಗೆ ರೈತರು ಮತ್ತು ಗ್ರಾಮಸ್ಥರ ಬಳಿ ಮಾಹಿತಿ ಪಡೆಯಲಾಯಿತು.
ಶಿವಮೊಗ್ಗ ತಾಲೂಕಿನ ಸರ್ಕಾರಿ ಪ್ರೌಢಶಾಲೆ ತಮ್ಮಡಿಹಳ್ಳಿ, ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ಪ್ರೌಢ ಶಾಲೆಗಳ "ಬಿ" ವಲಯ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಶಾಲಾ ಬಾಲಕ - ಬಾಲಕಿಯರ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು.
ಶಿವಮೊಗ್ಗ ತಾಲೂಕಿನ ಕುಂಸಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ, ಸನ್ಮಾನ ಸ್ವೀಕರಿ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾತನಾಡಿ, ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯೊಂದಿಗೆ ಚರ್ಚೆ ನಡೆಸಲಾಯಿತು.
ಶಿವಮೊಗ್ಗದ ಯಲವಟ್ಟಿ ಗ್ರಾಮದಲ್ಲಿ, ಸಿರಿಗೆರೆಯ ಶ್ರೀ ಮದ್ಧುಜ್ಜಯಿನಿ ಸದ್ಧರ್ಮಸಿಂಹಾಸನಧ್ಧೀಶ ಶ್ರೀ ತರಳಬಾಳು ಜಗದ್ಗುರು 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು 32 ನೇ ಶ್ರದ್ಧಾಂಜಲಿ ಸಮಾರಂಭ ದಾಸೋಹಕ್ಕೆ ಶಿವಮೊಗ್ಗ ತಾಲ್ಲೂಕಿನ ಭಕ್ತರಿಂದ “ಭಕ್ತಿ ಸಮರ್ಪಣಾ” ಸಮಾರಂಭದಲ್ಲಿ ಭಾಗಿಯಾದ ಕ್ಷಣ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ, ಸಾಲೂರು ತಾಂಡಾದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಮಾಜದ ಹಿರಿಯರಿಂದ ಸನ್ಮಾನ ಸ್ವೀಕರಿಸಿದ ಕ್ಷಣ.
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಕೇಂದ್ರ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರು, ಜನತಾದಳ (ಜಾತ್ಯತೀತ) ರಾಜ್ಯಾಧ್ಯಕ್ಷರು, ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು H D Kumaraswamy ರವರೊಂದಿಗೆ ಮಾಧ್ಯಮ ಸುದ್ದಿಗೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ JDS ರಾಜ್ಯ ಕೋರ್ ಕಮಿಟಿ ಸದಸ್ಯರು, ಶಿವಮೊಗ್ಗದ ಮಾಜಿ ಶಾಸಕರಾದ ಪ್ರಸನ್ನ ಕುಮಾರವರು, ಶ್ರೀಮತಿ ಶಾರದಾ ಅಪ್ಪಾಜಿಗೌಡ ರವರು, ಎಂ.ಎಲ್.ಸಿ ಭೋಜೇಗೌಡರವರು ಮತ್ತು ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರು ಭಾಗಿಯಾಗಿದ್ದರು.