ಕೋವಿಡ್ ಎಂಬ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿ ಸಾಮಾನ್ಯರ ಜನಜೀವನದ ಮೇಲೆ ಬರೆ ಎಳೆದಂತಾಗಿತ್ತು. ಮನೆಯಿಂದ ಹೊರ ಬರುವುದಕ್ಕೂ ಹೆದರುವಂತಹ ಸಂದರ್ಭ ಕೋವಿಡ್ ಸಮಯದಲ್ಲಿ ನಿರ್ಮಾಣವಾಗಿತ್ತು. ಲಕ್ಷಾಂತರ ಜನ ಕೆಲಸ ಕಳೆದುಕೊಂಡರು, ಲಕ್ಷಾಂತರ ಸಾವುಗಳನ್ನು ನೋಡುವಂತಾಯಿತು. ಅದೆಷ್ಟೋ ಜನರಿಗೆ ಕೆಲಸವಿಲ್ಲ, ಹಣದ ನೆರವು ಕೊಟ್ಟರು ಅವಶ್ಯಕ ಸಾಮಾಗ್ರಿಗಳನ್ನು ತೆಗೆದು ಕೊಳ್ಳದಂತಹ ಪರಿಸ್ಥಿತಿ. ಮೊಬೈಲ್ ಮೂಲಕ ಕ್ಷೇತ್ರದ ಜನರ ಕಷ್ಟಗಳನ್ನು ತಿಳಿದು ಕೊಂಡ ನಂತರ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಸುಮ್ಮನೆ ಕೂತರೆ ಏನೂ ಆಗದು ಕ್ಷೇತ್ರದ ಜನರಿಗೆ ಏನಾದರೂ ಸಹಾಯ ಮಾಡಲೆಬೇಕು ಎಂದು ಪಣ ತೊಟ್ಟು ಕಾರ್ಯಕರ್ತರ ನರವಿನೊಂದಿಗೆ ಅನೇಕ ಕೆಲಸಗಳನ್ನು ಮಾಡಲಾಯಿತು. ಕೋವಿಡ್ ನಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು , ಕಾರ್ಯಕರ್ತರ ಸಹಾಯದಿಂದ ಜಾತಿ, ಮತ, ಧರ್ಮದ ಬೇಧವಿಲ್ಲದೆ ಕ್ಷೇತ್ರದ ಬಡವರನ್ನು ಗುರುತಿಸಿ ಪಟ್ಟಿ ಮಾಡಿ ದಿನಸಿ ಕಿಟ್, ಮಾಸ್ಕ್ ,ಮೆಡಿಸಿನ್ ಕೊಟ್ಟು ಸಹಾಯ ಮಾಡಲಾಯಿತು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ೧೧ ಸಾವಿರ ಜನರಿಗೆ ಆಗುವಷ್ಟು ಅಕ್ಕಿ ಬೇಳೆ ಸಕ್ಕರೆ ಹಾಗೂ ಇತರೆ ಸಾಮಾಗ್ರಿಗಳ ಕಿಟ್ ಅನ್ನು ಪೂರೈಸಲಾಯಿತು. ಹಗಲು ರಾತ್ರಿ ಶ್ರಮಿಸಿ ಕಾರ್ಯಕರ್ತರ ಮೂಲಕ ಮನೆ ಮನೆಗೆ ದಿನಸಿ ಕಿಟ್‌ಗಳನ್ನು ತಲುಪಿಸಿಲಾಯಿತು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿಗೆ ಸಾಧ್ಯವಾದಷ್ಟು ನೆರವನ್ನು ಕೋವಿಡ್ ಸಮಯದಲ್ಲಿ ನೀಡಿದೆನು.