ಮಾರಶೆಟ್ಟಿಹಳ್ಳಿ ಸರ್ಕಲ್ ನಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕ್ಷಣ.
ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರಿನ ಎಂ. ಡಿ ಕಾಲೊನಿಯಲ್ಲಿರುವ ಕೇರಿ ಮತ್ತು ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ, ಮತ್ತು ಮನೆಗಳಿಗೆ ನೀರು ನುಗ್ಗಿರುವ ಹಿನ್ನಲೆಯಲ್ಲಿ ಮನೆಯಲ್ಲಿ ತಂಗಿದ್ದ ಸಂತ್ರಸ್ತರು ಹೊಳೆನೊನ್ನೂರಿನ ನಿರಾಶಿತ ಸಂತ್ರಸ್ಥರ ಕೇಂದ್ರದಲ್ಲಿ ಆಶ್ರಯ ಪಡೆಯುತಿದ್ದು, ಸಂತ್ರಸ್ತರನ್ನು ಭೇಟಿ ಮಾಡಿ ಅವರ ಯೋಗ ಕ್ಷೇಮ ವಿಚಾರಿಸಲಾಯಿತು.
ಶಿವಮೊಗ್ಗ ಗ್ರಾಮಾಂತರದ ಯುವ ಘಟಕದ ಅಧ್ಯಕ್ಷರಾಗಿ ನೇ ಬಾರಿ ಮರು ಆಯ್ಕೆಯಾದ ಬಿಂದು.ಹೆಚ್. ಎಸ್ ರವರಿಗೆ ಆದೇಶ ಪತ್ರವನ್ನು ಶಿವಮೊಗ್ಗ ಜಿಲ್ಲಾ ಜನತಾದಳ (ಜಾತ್ಯತೀತ) ಕಚೇರಿಯಲ್ಲಿ ಜಿಲ್ಲಾ ಜನತಾದಳ ಅಧ್ಯಕ್ಷರಾದ ಕಡಿದಾಳ್ ಗೋಪಾಲ್ ಅವರು ಮತ್ತು ಶಾಸಕರಾದ ಭೋಜೇಗೌಡರು ಸಮ್ಮುಖದಲ್ಲಿ ಆದೇಶ ಪತ್ರವನ್ನು ಹಸ್ತಾಂತರ ಮಾಡಿ ಮತ್ತು ಶಾಸಕರಾದ ಭೋಜೇಗೌಡ ರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು.
ಭದ್ರಾ ಕಾಡ ನಿಗಮದ ಅಧ್ಯಕ್ಷರಾದ ಶ್ರೀ ಡಾ. ಅಂಶುಮಂತ್ ಮತ್ತು ಜಿಲ್ಲಾ ವಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರ ಅವರ ಅಧ್ಯಕ್ಷತೆಯಲ್ಲಿ ನಡೆದ 2024-25 ನೇ ಸಾಲಿನ ಭದ್ರಾ ಜಲಾಶಯದ ಮುಂಗಾರು ಹಂಗಾಮಿನ 85 ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗಿಯಾದ ಸಂದರ್ಭ.
ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ(ರಿ) ಮತ್ತು ಶಿವಮೊಗ್ಗ ತಾಲ್ಲೂಕು ಬಂಜಾರ ಸಂಘ(ರಿ) ಮತ್ತು ಜಿಲ್ಲಾ ಗೋರ್ ಭಾಯಿ ಪತ್ತಿನ ಸಹಕಾರ ಸಂಘ ಗೋರ್ ಸೀಕ್ವಾಡಿ ಸಾಮಾಜಿಕ ಚಳುವಳಿ ಶಿವಮೊಗ್ಗ, ಮತ್ತು ಶಿವಮೊಗ್ಗ ತಾಲ್ಲೂಕು ಮಹಿಳಾ ಬಂಜಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 22ನೇ ವರ್ಷದ ಬಂಜಾರ ಸಮುದಾಯದ "ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ" ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗಿಯಾದ ಕ್ಷಣ.
ಶಿವಮೊಗ್ಗ ತಾಲೂಕು ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ (ರಿ,) ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವ ಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನೆನಪಿನ ಕಾಣಿಕೆ ಸ್ವೀಕರಿಸಿದ ಕ್ಷಣ.