ಕುರಿತು

ಶಿವಮೊಗ್ಗ ಗ್ರಾಮಾಂತರದ ಶಾಸಕಿ ಆಗಿ ಎರಡು ಬಾರಿ ಆಯ್ಕೆ ಆಗಿರುವ ಶಾರದ ಪೂರ್ಯಾನಾಯ್ಕ್ ಶಿಕಾರಿಪುರದ ಹಳ್ಳಿಯೊಂದರಲ್ಲಿ ಜನಿಸಿದರು. ಚಿಕ್ಕ ವಯ್ಯಸ್ಸಿನಿಂದಲೇ ಸೃಜನಶೀಲತೆ, ಸ್ನೇಹ ಹಾಗೂ ಸಹಾಯ ಗುಣಗಳನ್ನು ರೂಢಿಸಿಕೊಂಡು ಬೆಳೆದಿದ್ದಾರೆ . ಪದವಿ ಶಿಕ್ಷಣ ಮುಗಿಸಿರುವ ಶಾರದ ಪೂರ್ಯನಾಯ್ಕ್ ಜೀವನದ ಪ್ರಮುಖ ಘಟ್ಟದಲ್ಲಿ ಎಸ್. ಪೂರ್ಯಾನಾಯ್ಕ್ ಅವರೊಟ್ಟಿಗೆ ಸಪ್ತಪದಿ ತುಳಿದು, ಪತಿಯ ಗುರಿ, ಸಾಧನೆಗೆ ಬೆಂಬಲವಾಗಿದ್ದರು. ಬದಲಾದ ಸಮಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಮೂಲಕ ರಾಜಕೀಯ ಜೀವನ ಆರಂಭಿಸಿದ ನಾಯಕಿ, ಜನರ ಬೆಂಬಲ ಹಾಗೂ ತಮ್ಮ ಕಾರ್ಯ ನೀತಿಯಿಂದ ರಾಜಕೀಯದ ಒಂದೊoದೇ ಮೆಟ್ಟಿಲನ್ನು ಏರಿ ಶಾಸಕಿಯಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. 1999 ರಲ್ಲಿ ಹಾರ‍್ನಹಳ್ಳಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯ ಆಗಿ ರಾಜಕೀಯ ಜೀವನ ಆರಂಭ ಮಾಡಿದ ನಾಯಕಿ, 2010 ರವೆರೆಗೂ ಜಿಲ್ಲಾ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. 2007-08 ರಲ್ಲಿ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುರುವುದು ಗಮನಾರ್ಹ.

About Image