ಶಿವಮೊಗ್ಗದ ಸಂಪತ್ ಕಾಂಪ್ಲೆಕ್ಸ್, ವಿನೊಬನಗರದಲ್ಲಿ ಕರ್ನಾಟಕ ರಾಜ್ಯ ವನ್ನಿಯರ್ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್(ರಿ.) ಹಾಗೂ ಕರುನಾಡು ರಾಜ್ಯ ವನ್ನಿಯರ್ ಮಹಾಸಭಾ ಮತ್ತು ಮಹಿಳಾ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಸಮಾಜದ SSLC & PUC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ.
ತುಂಗಾನದಿಗೆ ನಿತ್ಯ ತ್ಯಾಜ್ಯ, ಚರಂಡಿ ನೀರು ಸೇರಿ ಮಲಿನವಾಗುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ನಟ ಅನಿರುದ್ ಜತ್ಕರ್ ಅವರು ಮುಂಖ್ಯಮತ್ರಿಯವರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ನಂತರ ನಿನ್ನೆ ಕಚೇರಿಗೆ ಭೇಟಿ ನೀಡಿ ತುಂಗಾ ಶುದ್ಧೀಕರಣಕ್ಕೆ ಕೈಜೋಡಿಸುವಂತೆ ಸಹಕಾರ ಕೋರಿ ಮನವಿ ಸಲ್ಲಿಸಿದ ಸಂದರ್ಭ ಮತ್ತು ನಮ್ಮ ಕ್ಷೇತ್ರದ ಕೂಡ್ಲಿಯಲ್ಲೂ ಕೂಡ ಸ್ವಚ್ಛತೆ ಹಾಗು "ತುಂಗೆ ಭದ್ರೆಯರಿಗೆ ಆರತಿ" ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿ ಈ ಕಾರ್ಯಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಲಾಯಿತು.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಜಲಸಂಪನ್ಮೂಲ ಇಲಾಖೆಯ ನಿರ್ದೇಶಕರಾದ ಶಿವಾನಂದ. ಎಸ್.ಬಣಕಾರ್ ರವರನ್ನು ಭೇಟಿ ಮಾಡಿ ತುಂಗಾ ಭದ್ರ ನೀರಿನ ಯೋಜನೆಯಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮುದ್ದಿನಕೊಪ್ಪ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 17 ಕೆರೆಗಳನ್ನು ತುಂಬಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಶಿವಮೊಗ್ಗದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲಾಯಿತು.
ಶಿವಮೊಗ್ಗದ ಶ್ರೀಗಂಧ ಸಭಾಂಗಣದಲ್ಲಿ, ಕರ್ನಾಟಕ ಸರ್ಕಾರದ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ರವರ ಅದ್ಯಕ್ಷತೆಯಲ್ಲಿ ಶಿವಮೊಗ್ಗ ವೃತ್ತದ ಅರಣ್ಯ ಅಧಿಕಾರಿಗಳೊಂದಿಗೆ ನಡೆದ ಪರಾಮರ್ಶನ ಸಭೆಯಲ್ಲಿ ಭಾಗಿಯಾಗಲಾಯಿತು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಂಢಘಟ್ಟ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ, ಅಲ್ಲಿನ ಕಾರ್ಯವೈಖರಿ ಮತ್ತು ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಂಡಘಟ್ಟ ಗ್ರಾಮದಲ್ಲಿ ಮಹೇಶ್ ರವರು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ತಮ್ಮ ಹುಲಿಯಮ್ಮ ದೇವಿ ಡಿಜಿಟಲ್ ಕೇಬಲ್ ನಿಂದ ನೂತನವಾಗಿ ಇಂಟರ್ನೆಟ್ ಮತ್ತು ವೈಫೈ ಸೌಲಭ್ಯಕ್ಕೆ ಚಾಲನೆ ನೀಡಿದ ಸಂದರ್ಭ.