ಮಲಗೊಪ್ಪದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದಲ್ಲಿ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯನ್ನು ತಕ್ಷಣವೇ ಕರೆದು ಭದ್ರಾ ಬಲ ದಂಡೆ ಮತ್ತು ಎಡದಂಡೆಯ ನಾಲೆಗಳಿಗೆ ಜನವರಿ ಒಂದನೇ ತಾರೀಖಿನಿಂದಲೇ ನೀರು ಹರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಮತ್ತು ಸತ್ಯಾಗ್ರಹವನ್ನು ಕೈಗೊಳ್ಳಲಾಗಿತ್ತು.
ಶಿವಮೊಗ್ಗ ಗ್ರಾಮಾಂತರದ ಹುಣಸೂಡಿನಲ್ಲಿ ಸುಮಾರು 40 ವರ್ಷಗಳಿಂದ ಕೃಷಿಗೆ ಬಳಸುತ್ತಿದ್ದ ರೈತರ ಜಮೀನನ್ನು ಅರಣ್ಯ ಇಲಾಖೆಯವರು ಗ್ರೀನ್ ಜೋನ್ ಎಂದು ಟ್ರಂಚ್ ಹೊಡಿಯಲು ಮುಂದಾದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ತಡೆಯಾಜ್ನೆ ನೀಡಿ, ಟ್ರಂಚ್ ಹೊಡಿಯುವ ಕೆಲಸವನ್ನು ನಿಲ್ಲಿಸಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಮಸ್ಯೆಯ ಬಗ್ಗೆ ಮಾತನಾಡಲಾಗಿದೆ.
ಶಿವಮೊಗ್ಗ ಮೀನುಗಾರಿಕೆ ಉಪನಿರ್ದೇಶಕರ ಕಛೇರಿಯಲ್ಲಿ 2023-24ನೇ ಸಾಲಿನ ಮೀನುಗಾರಿಕೆ ಇಲಾಖೆಯಿಂದ ಕೊಡಲಾಗುವ ಮೀನುಗಾರಿಕೆ ಸಲಕರಣೆ ಕಿಟ್, ಸೇಫ್ ಜಾಕೆಟ್ಸ್ ಹಾಗೂ ಹರಿಗೋಲನ್ನು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮೀನುಗಾರರಿಗೆ ವಿತರಿಸಲಾಯಿತು.
ಬೆಳಗಾವಿಯಲ್ಲಿ ಅಂಬೇಡ್ಕರ್ ಪುತ್ತಳಿಗೆ @H D Kumaraswamy ಅಣ್ಣನ ಜೊತೆಗೂಡಿ ಪುಷ್ಪಾರ್ಚನೆ ಮಾಡಿದ ಸಂದರ್ಭ
ಕಲ್ಲುಕೊಪ್ಪ ಗ್ರಾಮದಲ್ಲಿ ದುರಸ್ತಿಯಲ್ಲಿರು ಚೆಕ್ ಡ್ಯಾಮ್ ನ ಪರಿಶೀಲನೆ ಮಾಡಿ, ಗ್ರಾಮದಲ್ಲಿ ಪ್ರಗತಿಯಲ್ಲಿರುವ ಜಲಜೀವನ್ ಮಿಷನ್ (JJM) ಕಾಮಗಾರಿಗಳ ಪರಿಶೀಲನೆ ಮಾಡಲಾಯಿತು ಹಾಗೂ ಸಂಬಂಧಪಟ್ಟ ಮಾಹಿತಿ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.