ಶ್ರೀ ಹೆಚ್ ಡಿ ದೇವೇಗೌಡ

ನಮ್ಮ ಯಶಸ್ಸಿನ ಮೂಲ

(ಭಾರತದ ಮಾಜಿ ಪ್ರಧಾನಿ)

Jayaprakash Narayan

ಹೆಚ್.ಡಿ.ದೇವೇಗೌಡ

ದೇವೇಗೌಡರು ಕರ್ನಾಟಕ ಕಂಡ ರಾಜಕಾರಣಿಗಳಲ್ಲೆಲ್ಲಾ ವಿಶಿಷ್ಠ ವ್ಯಕ್ತಿತ್ವದ ರಾಜಕಾರಣಿ. ಅಪ್ಪಟ ಗ್ರಾಮೀಣ ಪರಿಸರದಿಂದ ಬೆಳೆದು ಬಂದ ಈ ರೈತನ ಮಗ ಸರಳತೆಯೊಂದಿಗೆ ಮೈಗೂಡಿಸಿಕೊಂಡಿದ್ದು ಹಠ ಮತ್ತು ಛಲಗಾರಿಕೆ. ರೈತ ಕುಟುಂಬದ ಕೂಸಾಗಿ, ಹಳ್ಳಿಯ ಹೊಲಗದ್ದೆಗಳಲ್ಲಿ ಅಡ್ಡಾಡಿಕೊಂಡು ಬೆಳೆದ ಗೌಡರು 50ರ ದಶಕದಲ್ಲಿಯೇ ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಅಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಜನಪ್ರತಿನಿಧಿಯಾದವರು. ರಾಜ್ಯ ರಾಜಕಾರಣಕ್ಕೆ ಅವರ ಪ್ರವೇಶ ವಿಧಾನ ಸಭೆಯ ಸದಸ್ಯರಾಗಿ 1962 ರಲ್ಲಿ. ಅಂದಿನಿAದ ಇಲ್ಲಿಯವರೆವಿಗೆ ರಾಜ್ಯ ಮತ್ತು ರಾಷ್ಟç ರಾಜಕಾರಣದಲ್ಲಿ ಅವರು ತಮ್ಮದೇ ಹೆಜ್ಜೆಗುರುತುಗಳನ್ನು ಮೂಡಿಸುತ್ತಾ ಆನೆ ನಡೆದದ್ದೇ ದಾರಿ ಎಂಬAತೆ ನಡೆಯುತ್ತಿರುವವರು.

50 ವರ್ಷಗಳ ಅವರ ಒಟ್ಟಾರೆ ಸಾರ್ವಜನಿಕ ಶಾಸಕಾಂಗದ ಬದುಕಿನಲ್ಲಿ ಅವರು ಅಧಿಕಾರದಲ್ಲಿದ್ದದ್ದು ಅತ್ಯಂತ ಅಲ್ಪ ಅವಧಿ. 1983 ರಿಂದ 1988 ರವರೆಗೆ ಸುಮಾರು 4 ವರ್ಷಗಳ ಕಾಲ ಮಂತ್ರಿಯಾಗಿ, 1994-96 ರ ಅವಧಿಯಲ್ಲಿ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿ ಮತ್ತು 1996 ರಲ್ಲಿ 10 ತಿಂಗಳು ದೇಶದ ಪ್ರಧಾನಿಯಾಗಿ ಅವರು ಅಧಿಕಾರ ಅನುಭವಿಸಿದ ಒಟ್ಟು ಅವಧಿ ಸುಮಾರು 6 ವರ್ಷ 4 ತಿಂಗಳು. 50 ವರ್ಷಗಳ ನಿರಂತರ ರಾಜಕೀಯ ಬದುಕಿನಲ್ಲಿ 6 ವರ್ಷ 4 ತಿಂಗಳು ಹೊರತುಪಡಿಸಿದರೆ ಅವರು ಜೀವನದುದ್ದಕ್ಕೂ ನಡೆಸಿಕೊಂಡು ಬಂದದ್ದು, ನಡೆಸಿಕೊಂಡು ಬರುತ್ತಿರುವುದು ಹೋರಾಟದ ಬದುಕನ್ನೇ. ಅದೂ ಕೂಡ ಪ್ರವಾಹಕ್ಕೆ ವಿರುದ್ಧವಾಗಿಯೇ ಸಾಗುವ ಹೋರಾಟದ ಬದುಕು. ಹಳ್ಳಿಯ ಯುವಕನೊಬ್ಬ 29ನೇ ವಯಸ್ಸಿಗೆ ಶಾಸಕನಾಗಿ, 39ನೇ ವಯಸ್ಸಿಗೆ ವಿರೋಧ ಪಕ್ಷದ ನಾಯಕನಾಗಿ, 50ನೇ ವಯಸ್ಸಿಗೆ ಮಂತ್ರಿಯಾಗಿ, 58ನೇ ವಯಸ್ಸಿಗೆ ಸಂಸದನಾಗಿ, 61ನೇ ವಯಸ್ಸಿಗೆ ಮುಖ್ಯಮಂತ್ರಿಯಾಗಿ, 63ನೇ ವಯಸ್ಸಿಗೆ ರಾಷ್ಟ್ರದ ಪ್ರಧಾನಿಯಾಗಿ, ಈಗ 89ರ ಇಳಿವಯಸ್ಸಿನಲ್ಲಿಯೂ ಜನರ ಮಧ್ಯದ ಹೋರಾಟಗಾರನಾಗಿ ಏರಿಳಿದ ಪರಿ ಜನತಂತ್ರದ ಸೊಗಸಷ್ಟೇ ಅಲ್ಲ ; ಅದೊಂದು ರೋಚಕ ಸಾಹಸಗಾಥೆ.