ಶಿವಮೊಗ್ಗ ಮಣ್ಣಿನ ಮಗ ಪೂರ್ಯಾನಾಯ್ಕ್ ಅತೀ ಕಡಿಮೆ ಸಮಯದಲ್ಲೇ ಅಪಾರ ಕೀರ್ತಿ, ಜನರ ಪ್ರೀತಿ ಸಂಪಾದಿಸಿದ ನಾಯಕ. ಸದಾ ಅಭಿವೃದ್ದಿಯ ಕನಸನ್ನು ಕಾಣುತ್ತಿದ್ದ ಧೀಮಂತ. ಯಾವುದೇ ಜಾತಿ ಭೇದವಿಲ್ಲದೇ ಎಲ್ಲರನ್ನು ಸ್ನೇಹದಿಂದ ನೋಡುವಂತ ಶ್ರೇಷ್ಠ ವ್ಯಕ್ತಿತ್ವ. ಕ್ಷೇತ್ರದ ಹೆಣ್ಣು ಮಕ್ಕಳಿಗೆ ನೀರಿನ ಸಮಸ್ಯೆ ಆಗುತ್ತಿರುವುದನ್ನು ತಿಳಿದು, ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗಲೇ ಹಳ್ಳಿಗಳ ಪ್ರತಿಯೊಂದು ಮನೆಗೆ ನೀರು ಹರಿಸಿದ ಮಹಾತ್ಮ . ವರ್ಲ್ಡ್ ಬ್ಯಾಂಕ್ ಯೋಜನೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮನೆಮಾತಾಗಿದ್ದ ಶ್ರೇಷ್ಠ ಜೀವಿ. ಕಲೆಗೆ ಬೆಲೆ ಕೊಡುತ್ತಿದ್ದ ಪೂರ್ಯಾ ನಾಯ್ಕ್ ಅನೇಕ ರಂಗಮಂದಿರಗಳನ್ನು ಕಟ್ಟಿಸಿದ್ದರು. ಸದಾ ಶಾಂತಿ ಸ್ವಭಾವದ ನಾಯಕ ಎಲ್ಲ ಸಂದರ್ಭದಲ್ಲು ತಮ್ಮ ಆರಿಸಿ ಕಳಿಸಿದವರ ಧ್ವನಿ ಆಗಿರುತ್ತಿದ್ದರು. ಜೀವನದಲ್ಲಿ ಅನೇಕ ಕಷ್ಟಗಳನ್ನು ನೋಡಿದ್ದ ಇವರು, ಸಹಾಯ ಎಂದು ಬಂದವರಿಗೆ ಸದಾ ನೆರವಾಗಿದ್ದಾರೆ. ಹಿಡಿದ ಕೆಲಸವನ್ನು ಮಾಡೇ ತೀರುವಂತ ಛಲಗಾರ, ರಾಜಕೀಯ ಚಾಣಾಕ್ಷರಾಗಿದ್ದ ಇವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಕ್ಷೇತ್ರದಲ್ಲಿ ಮಾಡಿದ್ದಾರೆ. ರಾಜಕೀಯದಲ್ಲಿ ಡೈನಾಮಿಕ್ ಲೀಡರ್ ಆಗಿದ್ದ ಪೂರ್ಯಾನಾಯ್ಕ್ ಜೀವನ ಶೈಲಿ, ಬದುಕಿದ ರೀತಿ ಅನೇಕರಿಗೆ ಸದಾ ಸ್ಪೂರ್ತಿ .