ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ, ರೈತರ ಆರ್ಥಿಕ ಶಕ್ತಿ ಹೆಚ್ಚುವ ಕೆಲಸಕ್ಕೆ ಚಾಲನೆ.ಕುಂಸಿಯ ರೈತ ಶಕ್ತಿ ರೈತ ಉತ್ಪಾದಕ ಸಂಸ್ಥೆಯ ಸದಸ್ಯರಿಗೆ ಷೇರು ಪ್ರಮಾಣ ಪತ್ರ ವಿತರಣೆ
ತುಂಗಾ ಏತ ನೀರಾವರಿ ಯೋಜನೆಯ ಸಾರ್ಥಕತೆ
ಶಿವಮೊಗ್ಗ ತಾಲೂಕು ಹಾಗೂ ಭದ್ರಾವತಿ ತಾಲೂಕು ಒಳಗೊಂಡ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ತುಂಗಾ ಹಾಗೂ ಭಧ್ರ ಜಲಾಶಯದಿಂದ ಅರ್ಧದಷ್ಟು ಕ್ಷೇತ್ರವು ಹಸಿರುಮಯವಾಗಿದೆ. ಉಳಿದ ಪ್ರದೇಶ ಅರೆ ಮಲೆನಾಡಿನಲ್ಲಿದ್ದರೂ ಬೇಸಿಗೆ ಕಾಲದಲ್ಲಿ ತೋಟದ ಬೆಳೆಗಳು ಹಾಗೂ ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದವು. ಕ್ಷೇತ್ರದ ಜನರಿಗೆ ಅನುಕೂಲವಾಗಲೆಂದು ಎರಡು ಏತ ನೀರಾವರಿ ಯೋಜನೆಗಳನ್ನು ಮಾಡಿಸಲಾಯಿತು . ಬರ ಪೀಡಿತ ಪ್ರದೇಶಗಳಿಗೆ ಹರಿಸಲು ಮಾಜಿ ಸಿಎಂ ಬಂಗಾರಪ್ಪನವರ ಕಾಲದಲ್ಲಿ ರೂಪುಗೊಂಡಿದ್ದ ತುಂಗಾ ಏತ ನೀರಾವರಿ ಯೋಜನೆ ದಶಕಕಳಿಂದ ನೆನೆಗುದಿಗೆ ಬಿದ್ದಿತ್ತು. ಶೆಟ್ಟಿಹಳ್ಳಿ ಅಭಯಾರಣ್ಯದ ಕಾರಣದಿಂದ ಯೋಜನೆ ಸಾಧ್ಯವಿಲ್ಲ ಎಂಬAತ್ತಾಗಿತ್ತು. ಕ್ಷೇತ್ರದ ಜನತೆಗೆ ಶತಾಯಗತಾಯ ನೀರು ಕೊಡಿಸಲೇಬೆಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಗಿದ್ದಾಗ ತಜ್ಞರ ಜೊತೆ ಚರ್ಚೆಸಿ ಮಾರ್ಗ ಬದಲಾವಣೆ ಮಾಡಿ ಯೋಜನೆಯನ್ನು ಪರಿಷ್ಕರಿಸಲಾಯಿತು. ಶಾಸಕಿಯಾದ ನಂತರ ಜನರ ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿ 8.70 ಕೋಟಿ ವೆಚ್ಚದ ಯೋಜನೆಯನ್ನು ಜಾರಿಗೊಳಿಸಿದೆ. ಈ ತುಂಗಾ ಏತ ನೀರಾವರಿ ಯೋಜನೆಯಿಂದ ತುಂಗೆಯನ್ನು ಕ್ಷೇತ್ರದ ಪುರದಾಳು ,ಗೌಡನಕೆರೆ,ಹಾಯ್‌ಹೊಳೆ, ಬಾರಹಳ್ಳ ಸೇರಿದಂತೆ ೪೦ ಕೆರೆಗಳಿಗೆ ಹರಿಸಲು ಸಾಧ್ಯವಾಯಿತು. ಇದರಿಂದ ಸುಮಾರು 7300 ಎಕರೆ ಭೂಮಿ ಹಸಿರಾಯಿತು .
ಹೋರಾಟ ಮಾಡಿ ಹೊಳಲೂರು ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದು
ಶಿವಮೊಗ್ಗ ತಾಲೂಕು ಹೊಳಲೂರು ಹೋಬಳಿ ವ್ಯಾಪ್ತಿಯ ಹರಮಘಟ್ಟ,ಸೋಮಿನಕೊಪ್ಪ,ಆಲದಹಳ್ಳಿ,ಸುತ್ತುಕೋಟೆ,ಬನ್ನಿಕೆರೆ ಹಾಗೂ ಕೊಮ್ಮನಾಳು ಗ್ರಾಮಗಳ ರೈತರ ೪೨೨ ಹೆಕ್ಟೇರ್‌ಗೆ ನೀರುಣಿಸಿ ಅಂತರ್ಜಲ ಹೆಚ್ಚು ಮಾಡುವ ಉದ್ದೇಶದಿಂದ ಹೊಳಲೂರು-ಬೂದಿಕೆರೆ ಏತ ನೀರಾವರಿ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯ ಹಾಗೂ ಗುತ್ತಿಗೆದಾರರ ವೈಫಲ್ಯದಿಂದ ಯೋಜನೆಗೆ ಗ್ರಹಣ ಹಿಡಿದಿತ್ತು. ಈ ಯೋಜನೆಗಾಗಿ ಸಾವಿರಾರು ರೈತರೊಂದಿಗೆ ಬೂದಿಕೆರೆ ಗ್ರಾಮದ ಕೆರೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾತ್ರಯಾತ್ರೆ ನಡೆಸಿದೆ. ಬೆಂಗಳೂರು ಮೂಲದ ಆರ್ ಎನ್ ಎ ಇಂಜಿನಿರ‍್ಸ್ ಲಿಮಿಟೆಡ್ ಕಂಪನಿ ಈ ಏತ ನೀರಾವರಿಯ ಟೆಂಡರ್ ಪಡೆದಿತ್ತು.ನಿಯಾಮವಳಿಯಂತೆ ೨೦೧೦ರಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿತ್ತು. ೭.೦೬ ಕೋಟಿ ರೂ ಯೋಜನೆಗೆ ಹೆಚ್ಚುವರಿಯಾಗಿ ೧,೨೫ ಕೋಟಿ ರೂಪಾಯಿಗಳನ್ನು ಗುತ್ತಿಗೆದಾರರು ಪಡೆದು ಕೊಂಡಿದ್ದರು. ೨೦೧೬ ರಲ್ಲೂ ಯೋಜನೆ ಪೂರ್ಣಗೊಳ್ಳದಿದ್ದಾಗ. ರೈತರಿಗೆ ಈ ಯೋಜನೆಯನ್ನು ತಲುಪಿಸಲೆಬೇಕೆಂದು ರಸ್ತೆಗೆ ಇಳಿದು ಹೋರಾಟ ಮಾಡಿದೆನು. ನಂತರ ಸರ್ಕಾರ ಇದರ ಬಗ್ಗೆ ತನಿಖೆ ನಡೆಸಿ ಪರಿಷ್ಕೃತ ಯೋಜನೆಯನ್ನು ಜಾರಿಗೊಳಿಸಿತು.