ಶ್ರೀ ಹೆಚ್ ಡಿ ಕುಮಾರಸ್ವಾಮಿ

ಜೆಡಿ (ಎಸ್) ನಾಯಕ

(ಕರ್ನಾಟಕದ ಮಾಜಿ ಮುಖ್ಯಮಂತ್ರಿ)

ಹೆಚ್.ಡಿ ಕುಮಾರ ಸ್ವಾಮಿ

ಕರುನಾಡು ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ. ಜನಪರ ಚಿಂತನೆ, ಕಾಳಜಿ, ದೂರದೃಷ್ಟಿತ್ವ ಹೊಂದಿರುವ ಅಪರೂಪದ ಜನನಾಯಕ. ಪ್ರಜೆಗಳ ನೋವು ಆಲಿಸಲು ಪ್ರಜೆಗಳ ಬಳಿಯೇ ತೆರಳಿ ಅವರ ನೋವು ನಿವಾರಿಸಿದ ಹೃದಯವಂತ ರಾಜಕಾರಣಿ. ಎರಡು ಬಾರಿ ಮುಖ್ಯಮಂತ್ರಿಯಾಗಿ (2006 ರಿಂದ 2007 ಹಾಗೂ 2018 ರಿಂದ 2019) ಕರ್ನಾಟಕ ರಾಜ್ಯವನ್ನು ಮುನ್ನಡೆಸಿದ ಧೀಮಂತ ನಾಯಕ. ಜನತಾ ದರ್ಶನದ ಹರಿಕಾರ, ಗ್ರಾಮವಾಸ್ತವ್ಯದ ಗುರಿಕಾರ. ರೈತ ಪರ ಕಾಳಜಿಯಿಂದ ರೈತರಿಗೆ ನಾನಾ ಯೋಜನೆಗಳ ಜೊತೆಗೆ ರೈತನನ್ನು ಸಾಲ ಮುಕ್ತಗೊಳಿಸಿದ ಮಣ್ಣಿನ ಮಗ. ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷನಾಗಿ ಕರುನಾಡಿನ ಪ್ರಾದೇಶಿಕ ಪಕ್ಷಕ್ಕೆ ರಾಷ್ಟç ಮನ್ನಣೆ ಗಳಿಸಿಕೊಟ್ಟ ಹೋರಾಟಗಾರ. ಅಪ್ಪನಿಗೆ ತಕ್ಕ ಮಗನೆಂಬAತೆ ಈ ದೇಶದ ಪ್ರಧಾನಮಂತ್ರಿಯಾಗಿ ದೇಶವಾಳಿದ ಹೆಚ್.ಡಿ ದೇವೇಗೌಡ ಅವರ ರಾಜಕೀಯ ಹೆಜ್ಜೆಗಳನ್ನು ಅನುಸರಿಸಿ ಪರಿಪಕ್ವ ನಾಯಕನೆನಿಸಿಕೊಂಡವರು ಹೆಚ್.ಡಿ ಕುಮಾರಸ್ವಾಮಿ.

ಕುಮಾರಸ್ವಾಮಿ ಕನಸು-ನನಸು: ಹೆಚ್.ಡಿ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯ ಹೊಳೇನರಸೀಪುರದ ತಾಲ್ಲೂಕಿನ ಹರದನಹಳ್ಳಿಯಲ್ಲಿ 1959ರ ಡಿಸೆಂಬರ್ 16ರಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಚೆನ್ನಮ್ಮ ಅವರ ಪುತ್ರನಾಗಿ ಜನಿಸಿದ್ರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾಸನದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಬೆಂಗಳೂರಿನ ಎಂ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್, ವಿಜಯ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಆದ್ರೆ ಇವರು ವೃತ್ತಿ ಜೀವನದ ಆರಂಭದಲ್ಲಿ ರಾಜಕೀಯಕ್ಕಿಂತ ಚಿತ್ರೋದ್ಯಮದತ್ತ ಹೆಚ್ಚು ಒಲವು ತೋರಿದರು. ಆ ಬಳಿಕ ಚಿತ್ರ ನಿರ್ಮಾಪಕವಾಗಿ, ಚಿತ್ರ ಪ್ರದರ್ಶಕರಾಗಿ, ಚಿತ್ರ ವಿತರಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸು ಗಳಿಸಿ, ಚಂದನವನದಲ್ಲಿ ತನ್ನದೇ ಛಾಪು ಮೂಡಿಸಿದರು. ಆದ್ರೆ ಕುಮಾರಸ್ವಾಮಿಯವರನ್ನು ರಾಜಕೀಯ ತನ್ನತ್ತ ಸೆಳೆದೇ ಬಿಡ್ತು.

ಮುಖ್ಯಮಂತ್ರಿಯಾಗಿ ಸುವರ್ಣಕಾಲ: ಹೆಚ್.ಡಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಆಳ್ವಿಕೆಯ ಕಾಲವನ್ನು ಸುವರ್ಣ ಕಾಲ ಎಂದೇ ಬಣ್ಣಿಸಲಾಯಿತು. ರಾಜ್ಯದ ದೀನ ದಲಿತರ, ರೈತರ, ಮಹಿಳೆಯರ, ಮಕ್ಕಳ ಪರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಯಿತು. ರೈತರ ಸಾಲಮನ್ನಾದಿಂದ ಹಿಡಿದು ಹತ್ತು ಹಲವು ಸಣ್ಣ ಮತ್ತು ದೊಡ್ಡ ನೀರಾವರಿ ಯೋಜನೆಗಳ ವರೆಗೆ, ಸರ್ಕಾರಿ ಶಾಲೆ ಕಾಲೇಜುಗಳ ಸ್ಥಾಪನೆಯಿಂದ ಹಿಡಿದು ಮಹಿಳಾ ಸಬಲೀಕರಣದ ವರೆಗೆ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು. ಜನತಾ ದರ್ಶನದ ಮೂಲಕ ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಆರಿಸಿ ಪರಿಹರಿಸುವ ಅತ್ಯದ್ಭುತ ಕಾರ್ಯಕ್ರಮ ಹಮ್ಮಿಕೊಂಡರು. ಇದರಿಂದ ಅದೆಷ್ಟೋ ನೊಂದವರಿಗೆ ನ್ಯಾಯದ ಪರಿಹಾರ ಸಿಕ್ತು. ಇನ್ನು ಗ್ರಾಮವಾಸ್ತವ್ಯದ ಮೂಲಕ ಜನರಿದ್ದಲ್ಲಿಗೆ ದೊರೆ ಹೋಗಿ ಅವರ ಮನೆಯಲ್ಲಿ ವಾಸಿಸಿ ಆ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ವಿನೂತನ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಸಿದರು. ಗ್ರಾಮವಾಸ್ತವ್ಯ ಇಡೀ ದೇಶಕ್ಕೆ ಮಾದರಿಯಾಯಿತು, ಎಷ್ಟೋ ಗ್ರಾಮಗಳು ಹೊಸತನವನ್ನು ಕಂಡವು. ಸಮಸ್ಯೆಗಳಿಂದ ಮುಕ್ತವಾದವು. ಹೀಗೆ ಕುಮಾರಸ್ವಾಮಿಯವರು ಕೆಲವೇ ತಿಂಗಳ ತಮ್ಮ ಅಧಿಕಾರವಧಿಯಲ್ಲಿ ಅತ್ಯದ್ಭುತ ಕೆಲಸ ಮಾಡಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದರು. ಯುವಕರಿಗೆ ಕುಮಾರಣ್ಣನಾಗಿ ಸ್ಫೂರ್ತಿಯಾದರು.